ಪ್ರಜ್ಞೆ ತಪ್ಪಿ ಬಿದ್ದಿದ್ದ ಸ್ಪರ್ಧಿಯನ್ನು ಹೆಗಲ ಮೇಲೆ ಹಾಕಿಕೊಂಡು 2.5 ಕಿ,ಮೀ ಓಡಿದ ಸೇನಾ ಕೆಡೆಟ್

ಖಡಕ್ ವಾಲ್ಸದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ)ಯ ಕ್ರಾಸ್ ಕಂಟ್ರಿ ರಸ್ತೆ ಓಟದಲ್ಲಿ ಸುಸ್ತಾಗಿ ಬಿದಿದ್ದ ಸ್ಪರ್ಧಿಯೊಬ್ಬನನ್ನು ಕೆಡೆಟ್ ಒಬ್ಬರು ಹೆಗಲ ಮೇಲೆ ಹಾಕಿಕೊಂಡು...
ಎನ್ಡಿಎ ಕೆಡೆಟ್
ಎನ್ಡಿಎ ಕೆಡೆಟ್
ನವದೆಹಲಿ: ಖಡಕ್ ವಾಲ್ಸದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ)ಯ ಕ್ರಾಸ್ ಕಂಟ್ರಿ ರಸ್ತೆ ಓಟದಲ್ಲಿ ಸುಸ್ತಾಗಿ ಬಿದಿದ್ದ ಸ್ಪರ್ಧಿಯೊಬ್ಬನನ್ನು ಕೆಡೆಟ್ ಒಬ್ಬರು ಹೆಗಲ ಮೇಲೆ ಹಾಕಿಕೊಂಡು ಸ್ಪರ್ಧೆ ಪೂರ್ಣಗೊಳಿಸಿರುವ ಆತನ ದಿಟ್ಟ ನಿರ್ಧಾರ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ  ಪಾತ್ರವಾಗಿದೆ. 
ಸೇನಾ ಅಕಾಡೆಮಿ ಪಠ್ಯಕ್ರಮದಲ್ಲಿ 13.8 ಕಿ.ಮೀ ಕ್ರಾಸ್ ಕಂಟ್ರಿ ಓಟ ಅತ್ಯಂತ ಮುಖ್ಯವಾದದ್ದು, ಫೆಬ್ರವರಿ 10ರಂದು ನಡೆದ ಓಟದಲ್ಲಿ ಕೆಡೆಟ್ ಚಿರಾಗ್ ಅರೋರಾ, ಓಡುತ್ತಿದ್ದಾಗ ಗುರಿ ತಲುಪಲು ಇನ್ನು 2.5 ಕಿ.ಮೀ ಇರುವಾಗ ಕಿರಿಯ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದಿದನ್ನು ಗಮನಿಸಿದ್ದಾರೆ. 
ಈ ವೇಳೆ ಅವರು ತಮ್ಮ ಗಮ್ಯವನ್ನು ಗಮನಿಸದೆ , ಸಮಯದ ಮಿತಿಯನ್ನು ಲೆಕ್ಕಿಸದೆ ಬಿದ್ದಿದ್ದ ವಿದ್ಯಾರ್ಥಿಯನ್ನು ಎತ್ತಿ ತಮ್ಮ ಬೆನ್ನ ಮೇಲೆ ಹಾಕಿಕೊಂಡು 2.5 ಕಿ.ಮೀ ದೂರು ಓಡಿ ಗುರಿ ಪೂರ್ಣಗೊಳಿಸಿದ್ದಾರೆ. 
ಅರೋರರ ಈ ನಡೆ ಎಲ್ಲ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದು ಲೆ,ಜ ಅಲೋಕ್ ಕ್ಲೇರ್, ರೇಬಾನ್ ಸನ್ ಗ್ಲಾಸ್ ಒಂದನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಯಾವ ವ್ಯಕ್ತಿಯೂ ಹಿಂದೆ ಬೀಳದಂತೆ ನೋಡಿಕೊಳ್ಳುವುದು ಸೇನಾ ಸ್ಪೂರ್ತಿ. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಂಬಾಲ ಎಚ್ ಕ್ಯೂ2 ಕಾಫ್ಸ್ ರ್ನ ಮುಖ್ಯಸ್ಥ ಕ್ಲೇರ್ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com